Follows Us on Facebook    
     
 
      CROSSLANDSCAPES - Year Book - 2017-18  
   

ಡಾ.ಸಿ.ಟಿ ಅಬ್ರಹಾಂ: ಕ್ರಾsಸ್‌ಲ್ಯಾಂಡ್ ಕಾಲೇಜಿನ ಸ್ಥಾಪಕರಾದ ಡಾ.ಸಿ.ಟಿ.ಅಬ್ರಹಾಂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಅನುಭವವನ್ನು ಹೊಂದಿದ್ದ ಒಬ್ಬ ಮಹಾನ್ ದಾರ್ಶನಿಕ. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಹಿಂದುಳಿzವರ ಅಭಿವೃದ್ದಿಗಾಗಿ ಶಿಕ್ಷಣ ಸಂಸ್ಥೆಗಳ ಅಗತ್ಯತೆಯನ್ನು ಅರಿತುಕೊಂಡವರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕನಸು ಮತ್ತು ಆಕಾಂಕ್ಷೆಗಳನ್ನು ಅರಿತುಕೊಂಡು ಅವರ ಶಿಕ್ಷಣದ  ಕನಸನ್ನು ನನಸಾಗಿಸಲು ಈ ಸಂಸ್ಥೆಯನ್ನು ಸ್ಥಾಪಿಸಿದರು.

 
         
 

ಆಡಳಿತ ಮಂಡಳಿ: ಕ್ರಾಸ್‌ಲ್ಯಾಂಡ್ ಕಾಲೇಜನ್ನು ಪ್ರಯೋರಿಟಿ ಟ್ರಸ್ಟ್, ಪ್ರಯೋರಿಟಿ ಶಿಕ್ಷಣ ಪ್ರತಿಷ್ಟಾನ ಮತ್ತು ಲಾಭದಾಯಕವಲ್ಲದ ಕ್ರಿಶ್ಚಿಯನ್ ಅಲ್ಪಸಂಖ್ಯಾತ ಚಾರಿಟೇಬಲ್ ಟ್ರಸ್ಟ್ ಜಂಟಿಯಾಗಿ ಪ್ರಾಯೋಜಿಸುತ್ತಿದೆ. ಈ ಸಂಸ್ಥೆಗಳು ಭಾರತದ ಜನಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈ ಆಡಳಿತ ಮಂಡಳಿಯು ಇಂಡಿಯಾ ಥಿಯೋಲೋಜಿಕಲ್ ಸೆಮಿನರಿ, ಸಿ.ಬಿ.ಎಸ್ ಇ ಪಠ್ಯಕ್ರಮದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ಮತ್ತು ಹೈಡಿ ಹೋಮ್‌ಗಳನ್ನು ಸಹ ನಡೆಸುತ್ತಿದೆ.

 
         
 

ಉದ್ದೇಶಗಳು: ಬ್ರಹ್ಮಾವರ ಮತ್ತು ಸುತ್ತಮುತ್ತಲಿನ ಹಾಗೂ ಭಾರತದಾದ್ಯಂತ ಇರುವ ಯುವಕ ಯುವತಿಯರಿಗೆ  ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ಅವಕಾಶಗಳನ್ನು ಒದಗಿಸುವುದು, 

ರಾಷ್ಟ್ರೀಯ ಏಕತೆ ಮತ್ತು ಅಂತರರಾಷ್ಟ್ರೀಯ ತಿಳುವಳಿಕೆಯನ್ನು ಬೆಳೆಸಲು ವಿಶ್ವವಿದ್ಯಾಲಯ ಶಿಕ್ಷಣವನ್ನು ನೀಡುವುದು, ಆರ್ಥಿಕವಾಗಿ ದುರ್ಬಲರಾದ ಯುವಕರಿಗೆ ಶಿಕ್ಷಣವನ್ನು ಮುಂದುವರಿಸಲು ಕ್ಯಾಂಪಸ್‌ನಲ್ಲಿ ಉದ್ಯೋಗವನ್ನು ದೊರಕಿಸಿಕೊಡುವ ಉದ್ದೇಶದಿಂದ ಸ್ಥಾಪಿತವಾಗಿದೆ.

 
       
 

  • ಮೂಲ ಮೌಲ್ಯಗಳು

  • ಕೌಟುಂಬಿಕ ವಾತಾವರಣ

  • ಕೈಗೆಟುಕುವ ಗುಣಮಟ್ಟದ ಶಿಕ್ಷಣ

  • ಸಮೂಹ ಕಾರ್ಯ

  • ವಿದ್ಯಾರ್ಥಿಗಳ ಚಾರಿತ್ರ್ಯ ನಿರ್ಮಾಣ

   
   

 

   
 

ಮಿಷನ್ ಸ್ಟೇಟ್‌ಮೆಂಟ್: ಕ್ರಾಸ್‌ಲ್ಯಾಂಡ್ ಕಾಲೇಜು ಗ್ರಾಮೀಣ ಸಮುದಾಯದ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ದೇವರು ಮತ್ತು ಮಾನವರ ಸೇವೆ ಮಾಡುವುದರ ಮೂಲಕ ಸಮಾಜದ ಸಶಕ್ತತೆ ಮತ್ತು ಪುಷ್ಟೀಕರಣವನ್ನು ತರುವ ಉದ್ದೇಶದೊಂದಿಗೆ ಅವರ ಒಟ್ಟು ಅಭಿವೃದ್ಧಿಗೆ ಉತ್ತಮ ತರಬೇತಿ ನೀಡುತ್ತಿದೆ.

ಅರ್ಥಪೂರ್ಣ ಶಿಕ್ಷಣವನ್ನು ಒದಗಿಸುವ ಮತ್ತು ಸಮುದಾಯಕ್ಕೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವಲ್ಲಿ, ಕಾಲೇಜು ತನ್ನ ಮಿಶನ್ ಹೇಳಿಕೆಯೊಂದಿಗೆ ನಿಕಟ ಸಂಬಂಧ ಹೊಂದಿದೆ.

   
       
 

Copyright@ 2008-2018 Crossland College, Brahmavar.  All rights reserved. Designed@Maldives Computers